ಪೊಳಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ಅಮ್ಮುಂಜೆ,ಕರಿಯಂಗಳ ಪ್ರಗತಿ ಬಂಧು ,ಸ್ವ-ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನಾಮ ಫಲಕದ ಉದ್ಘಾಟನೆ ಹಾಗೂ ದಶಮಾನೋತ್ಸವದ ಕಾರ್ಯಕ್ರಮವು ಮಾ.13. ಭಾನುವಾರದಂದು ಬೆಳಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ.
ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಆಶೀರ್ವಚನ ನೀಡಲಿದ್ದಾರೆ.ಉಳಿಪಾಡಿ ಗುತ್ತು ರಾಜೇಶ್ ನಾಕ್ ಅವರು ನಾಮಫಲಕದ ಉದ್ಘಾಟನೆ ಮಾಡಲಿದ್ದಾರೆ.ಪೊಳಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಎ ಮಂಜಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ.ಗ್ರಾ.ಯೋ. ಬಂಟ್ವಾಳ ಯೋಜನಾಧಿಕಾರಿ ಸುನೀತ ನಾಯ್ಕ, ತುಂಬೆ ವಲಯದ ಅಧ್ಯಕ್ಷ ಮಾದವ ವಳವೂರು, ಅಮ್ಮುಂಜೆ ಶಾಲಾ ಮುಖ್ಯ ಶಿಕ್ಷಕ ರಘುನಾಥ ರೈ, ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಜಯರಾಮಕೃಷ್ಣ ಪೊಳಲಿ, ವೆಂಕಟೇಶ್ ನಾವಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.