ಪೊಳಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಪ್ರಗತಿ ಬಂದು ಸ್ವ. ಸಹಾಯ ಸಂಘದ ವತಿಯಿಂದ ಕೃಷಿ ಚಟುವಟಿಕೆಗೆ ಹೆಚ್ಚಿನ ಹೊತ್ತು ನೀಡಿ ಮಹಿಳೆಯರು ಸ್ವಲಂಭಿಗಳಾಗಿ ಬದುಕುವಂತಗಬೇಕು ಕೇಂದ್ರ ಸರಕಾರದಿಂದ ಮಹಿಳೆಯರಿಗಾಗಿಯೇ ಸಿಗುವ ಸವಲತ್ತುಗಳನ್ನು ಮಹಿಳೆಯರಿಗೆ ತಿಳಿಸುವ ಜವಾಬ್ದಾರಿ ಸ್ವ ಸಹಾಯ ಸಂಘದ ವತಿಯಿಂದ ಮಾಡುವ ಅವಸ್ಯಕತೆ ಇದೆ ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು.

ಅವರು ಮಾ. 13ರಂದು ಭಾನುವಾರ ಪೊಳಲಿ ಸರ್ವಮಂಗಳಾ ಸಭಾಗ್ರಹದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ಅಮ್ಮುಂಜೆ, ಕರಿಯಂಗಳ ಪ್ರಗತಿ ಬಂಧು , ಸ್ವ-ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಪೊಳಲಿಗೆ ಬರುವ ಭಕ್ತಾಧಿಗಳಿಗೆ ದ್ವಾರದ ಹತ್ತಿರ ನಾಮಫಲಕವನ್ನೂ ದಶಮಾನೋತ್ಸವ ಸವಿ ನೆನಪಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ಅಮ್ಮುಂಜೆ, ಕರಿಯಂಗಳ ಪ್ರಗತಿ ಬಂಧು , ಸ್ವ-ಸಹಾಯ ಸಂಘಗಳ ಸದಸ್ಯರು ನಿರ್ಮಿಸಿದ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನಾಮ ಫಲಕದ ಉದ್ಘಾಟನೆಯನ್ನು ಉಳಿಪಾಡಿ ಗುತ್ತು ರಾಜೇಶ್ ನಾಕ್ ನೆರವೇರಿಸಿದರು.
ಅಧ್ಯಕ್ಷತೆಯನ್ನು ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೊಳಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಎ ಮಂಜಯ್ಯ ಶೆಟ್ಟಿ ಶ್ರೀ.ಕ್ಷೇ.ಧ.ಗ್ರಾ.ಯೋ. ಬಂಟ್ವಾಳ ಯೋಜನಾಧಿಕಾರಿ ಸುನೀತ ನಾಯ್ಕ, ತುಂಬೆ ವಲಯದ ಅಧ್ಯಕ್ಷ ಮಾದವ ವಳವೂರು, ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ಜಯರಾಮಕೃಷ್ಣ ಪೊಳಲಿ, ವೆಂಕಟೇಶ್ ನಾವಡ, ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಹಾಗೂ ಜಯರಾಮಕ್ರಷ್ಣ ಪೊಳಲಿ , ಜನಾರ್ಧನ ಆಚಾರ್ಯ ಅವರುಗಳನ್ಣು ಸ್ವಾಮೀಜಿ ಸನ್ಮಾನಿಸಿದರು.
ರೇಖಾ ವರದಿ ವಾಚಿಸಿದರು ಲಾವಣ್ಯ ಸ್ವಾಗತಿಸಿ ನಿಶಾ ಧನ್ಯವಾದವಿತ್ತರು ವಾಧಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.












