ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವದ ದ್ವಜರೋಹಣದಿಂದ ಅಂದರೆ ಮಕರ ಸಂಕ್ರಂಣದಿಂದ 18 ದಿನಗಳವರೆಗೆ ಪೊಳಲಿ ಸಾವಿರ ಸೀಮೆಯಲ್ಲಿ ಭಕ್ತಾಧಿಗಳು ಮಾಂಸಹಾರಿ ನಿಷಿದ್ಧ ಮಾಡುತ್ತಾರೆ.
ಜಾತ್ರೆಯ 18ನೇ ದಿನದಂದು ಅಂದರೆ ಎ.1 ರಂದು ಶುಕ್ರವಾರ ದೇವಸ್ಥಾನದ ಈಶಾನ್ಯಭಾಗದ ಗದ್ದೆಯ ನಾಲ್ಕು ಮೂಲೆಯಲ್ಲಿ ನಾಲ್ಕು ಕುಂಟ ಹಾಕಿ ಅದರಲ್ಲಿ 4 ಕೋಳಿಗಳನ್ನು ಕಟ್ಟಿ ಹಾಕಿ ಔಪಚಾರಿಕಾವಾಗಿ ಕೋಳಿಅಂಕ (ಕಟ್ಟ) ನಡೆಸುತ್ತಾರೆ. ನಂತರ ಪೊಳಲಿಯ ಭಾಗದಲ್ಲಿ ಮಾಂಸಹಾರವನ್ನು ಮಾಡುತ್ತಾರೆ. ರಾತ್ರಿ 7ಗಂಟೆಯಿಂದ ದೇವರ ಬಲಿ ಉತ್ಸವ ನಡೆಯುತ್ತದೆ. ನಂತರ ಬೆಳಿರಥೋತ್ಸವ ನಡೆಯಿತು.






