ಕೈಕಂಬ:ಭಾರತೀಯ ಜನತಾಪಾರ್ಟಿ ದ.ಕ.ಜಿಲ್ಲಾ ಸ್ಲಂ ಮೋರ್ಚಾ ಮತ್ತು ಶ್ರೀಶಕ್ತಿ ಸಂಘಗಳು ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ತುಪ್ಪೆಕಲ್ಲು ಶ್ರೀ ಉಳ್ಳಾಕ್ಲು ಮಂಗ್ರತಾಯಿ ದೈವಸ್ಥಾನದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮವನ್ನು ಅರ್ಕುಳ ಬೀಡಿನ ದರ್ಮಾಧಿಕಾರಿ ವಜ್ರನಾಭ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು .
ಸ್ವಚ್ಚಾತಾ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೆಮಾರ್, ಸ್ಲಂ ಮೋರ್ಚಾದ ಜಿಲ್ಲಾ ಅಧ್ಯಕ್ಷ ರಾಮ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ತುಪ್ಪೆಕಲ್ಲು, ಚೇತನ್ ಪೂಜಾರಿ, ಮಂಗಳೂರು ನಗರ ಉತ್ತರ ಹಿಂದುಳಿದ ಮೊರ್ಚಾದ ಕಾರ್ಯದರ್ಶಿ ಅಶೋಕ ಕೊಟ್ಟಾರಿ, ಉಪಾಧ್ಯಕ್ಷರಾದ ಜನಾರ್ಧನ ಅರ್ಕುಳ, ಡಾ.ಜಯಕುಮಾರ್ ಶೆಟ್ಟಿ, ರತ್ನರಾಜ ಶೆಟ್ಟಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಾಧವ ತುಪ್ಪೆಕಲ್ಲು, ಅಡ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಮಾ ಮತ್ತು ಗ್ರಾ.ಪಂ.ಸದಸ್ಯರು, ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರು ಶ್ರೀಶಕ್ತಿಸಂಘದ ಸದಸ್ಯರು ಸ್ವಚ್ಚಾತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

