ಕೈಕಂಬ: ಎಡಪದವು ಪಾಡ್ಯಾರ್ ಫ್ರೆಂಡ್ಸ್ ಕ್ಲಬ್ ಇದರ ದ್ವಿತೀಯ ವರ್ಷದ ಸಾರ್ವಜನಿಕ “ಶ್ರೀ ಸತ್ಯನಾರಾಯಣ ಪೂಜೆ”ಯು ರತೀಶ್ ಭಟ್ ಪಲ್ಕೆ ಇವರ ನೇತೃತ್ವದಲ್ಲಿ ಎ. 30 ರಂದು ಭಾನುವಾರ ಪಾಡ್ಯಾರ್ ಮಜಲುಗದ್ದೆಯಲ್ಲಿ ಸಾಯಂಕಾಲ 5 ಗಂಟೆಯಿಂದ ಜರುಗಲಿದೆ.
6.30 ರಿಂದ ಮಳಲಿ ಮಟ್ಟಿ ಶ್ರೀ ಕಾಲಬೈರವ ಮಂಜುನಾಥೇಶ್ವರ ಭಜನಾ ಮಂಡಳಿ ಇವರಿಂದ” ಭಜನೆ “ಬಳಿಕ ಸಾರ್ವಜನಿಕ “ಅನ್ನಸಂತರ್ಪಣೆ” ರಾತ್ರಿ 9.30 ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ “ಬಪ್ಪನಾಡು ಕ್ಷೇತ್ರ ಮಹಾತ್ಮೆ “ಎಂಬ ಪುಣ್ಯ ಕಥಾ ಭಾಗವನ್ನು ಬಯಾಲಾಟವಾಗಿ ಆಡಿತೋರಿಸಲಿರುವರು. ಎಂದು ಪಾಡ್ಯಾರ್ ಫ್ರೆಂಡ್ಸ್ ಕ್ಲಬ್ ಇದರ ಪ್ರಕಟನೆ ತಿಳಿಸಿದೆ.