ಕೈಕಂಬ:ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಕೈಕಂಬ ಹಾಗೂ ಬಿ.ಪಿ.ಪಿ.ಐ.ದೆಹಲಿ ಇದರ ಸಹಯೋಗದೊಂದಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಗಾರ ಹಾಗೂ ಜನೌಷದ ಕೇಂದ್ರಗಳ ಲೋಕಾರ್ಪನೆ ಸಮಾರಂಭವು ಎ.22 ಶನಿವಾರ ಬೆಳಗ್ಗೆ 10 ಘಂಟೆಗೆ ಟಿ.ವಿ.ರಮನ್ ಪೈ ಕನ್ವೆನ್‍ಶನ್ ಸೆಂಟರ್ ನವಭಾರತ್ ಸರ್ಕಲ್ ಕೊಡಿಯಲ್‍ಬೈಲ್ ಮಂಗಳೂರುನಲ್ಲಿ ನಡೆಯಲಿದೆ.bppi-logo

1416161389-8201

ಉದ್ಘಾಟನೆಯನ್ನು ಭಾರತ ಸರಕಾರದ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮರ್ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ್ ಜಿಗಜಿಣಗಿ, ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕ, ಕರ್ನಾಟಕ ಸರಕಾರ ಹಾಗೂ ಶಾಸಕರು ವಿಧಾನ ಪರಿಷತ್‍ನ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕರ್ನಾಟಕ ಸರಕಾರ ಹಾಗೂ ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ  ಹಾಗೂ ಅಧ್ಯಕ್ಷ ಜೆ.ಆರ್.ಲೋಬೋ, ಮಾತೃಭೂಮಿ ಸೌಹಾರ್ದ ಸಹಕಾರಿ(ನಿ) ಇದರ ಅಧ್ಯಕ್ಷ ಭಾಸ್ಕರ್ ದೇವಸ್ಯ, ಬಿ.ಪಿ.ಪಿ,ಐ ಸಿ.ಇ.ಒ ಬಿಪ್ಲಪ್ ಚಟರ್ಜಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಉಪಾಧ್ಯಕ್ಷ ಯು.ರಾಜೀವ್,ಮಂಗಳೂರು ವ್ರತ್ತ ಔಷದ ನಿಯಂತ್ರಣಾಧಿಕಾರಿ ಶಂಕರ ನಾಯಕ್, ಭಾಗವಹಿಸಲಿರುವರು.

By suddi9

Leave a Reply

Your email address will not be published. Required fields are marked *