ಕೈಕಂಬ:ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಕೈಕಂಬ ಹಾಗೂ ಬಿ.ಪಿ.ಪಿ.ಐ.ದೆಹಲಿ ಇದರ ಸಹಯೋಗದೊಂದಿಗೆ ಕೇಂದ್ರ ಸರಕಾರದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮಾಹಿತಿ ಕಾರ್ಯಗಾರ ಹಾಗೂ ಜನೌಷದ ಕೇಂದ್ರಗಳ ಲೋಕಾರ್ಪನೆ ಸಮಾರಂಭವು ಎ.22 ಶನಿವಾರ ಬೆಳಗ್ಗೆ 10 ಘಂಟೆಗೆ ಟಿ.ವಿ.ರಮನ್ ಪೈ ಕನ್ವೆನ್‍ಶನ್ ಸೆಂಟರ್ ನವಭಾರತ್ ಸರ್ಕಲ್ ಕೊಡಿಯಲ್‍ಬೈಲ್ ಮಂಗಳೂರುನಲ್ಲಿ ನಡೆಯಿತು.

ಕೇಂದ್ರ ಸಚಿವ ಅನಂತಕುಮರ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ರಾಜ್ಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ್ ಜಿಗಜಿಣಗಿ, ದ.ಕ.ಜಿ.ಪಂ.ಅಧ್ಯಕ್ಷರು ಮೀನಾಕ್ಷಿ ಶಾಂತಿಗೋಡು, ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕ, ಕರ್ನಾಟಕ ಸರಕಾರ ಹಾಗೂ ಶಾಸಕರು ವಿಧಾನ ಪರಿಷತ್‍ನ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕರ್ನಾಟಕ ಸರಕಾರ ಹಾಗೂ ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಅಧ್ಯಕ್ಷ ಜೆ.ಆರ್.ಲೋಬೋ, ಮಾತೃಭೂಮಿ ಸೌಹಾರ್ದ ಸಹಕಾರಿ(ನಿ) ಇದರ ಅಧ್ಯಕ್ಷ ಭಾಸ್ಕರ್ ದೇವಸ್ಯ, ಬಿ.ಪಿ.ಪಿ,ಐ ಸಿ.ಇ.ಒ ಬಿಪ್ಲಪ್ ಚಟರ್ಜಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಉಪಾಧ್ಯಕ್ಷ ಯು.ರಾಜೀವ್, ಔಷದ ನಿಯಂತ್ರಣಾಧಿಕಾರಿ ಶಂಕರ ನಾಯಕ್, ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಕೈಕಂಬ ಇದರ ಅಧ್ಯಕ್ಷ ಭಾಸ್ಕರ್ ದೇವಸ್ಯ, ಉಪಾಧ್ಯಕ್ಷ ಕೆ.ಟಿ.ಸುವರ್ಣ ಆಡಳಿತ ನಿರ್ದೇಶಕ ಕೃಷ್ಣ ಕೊಂಪದವು ಉಪಸ್ಥಿತರಿದ್ದರು.






