ಬಂಟ್ವಾಳ: ಹದೆಗೆಟ್ಟು ಸಂಚಾರಕ್ಕೂ ಅಯೋಗ್ಯವಾಗಿರುವ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯನ್ನು ಸುಸ್ಥಿತಿಗೆ ತರುವಂತೆ ಆಗ್ರಹಿಸಿ ಇಲ್ಲಿನ ರಿಕ್ಷಾ, ಕಾರು, ವ್ಯಾನು ಚಾಲಕರು, ಮಾಲಕರು ಸಾರ್ವಜನಿಕರ ಸಹಕಾರದೊಂದಿಗೆ ಮಂಗಳವಾರ ರಸ್ತೆ ತಡೆಗೈದು ಪ್ರತಿಭಟನೆ ನಡೆಸಿದರು.ವಾರದೊಳಗೆ ರಸ್ತೆ ದುರಸ್ಥಿ ಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಾರು ಮತ್ತು ವ್ಯಾನು ಚಾಲಕ – ಮಾಲಕರ ಸಂಘದ ಮುಖಂಡ ಬಿ.ಎಂ.ಪ್ರಭಾಕರ್ ದೈವಗುಡ್ಡೆ, ವಾಹನ ಚಾಲಕರು ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸುತ್ತಿದ್ದರೂ ಸರಕಾರ ರಸ್ತೆಯನ್ನು ಮಾತ್ರ ಸುಸ್ಥಿತಿಗೆ ತರುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಕೂಡಾ ಈ ನಿಟ್ಟಿನಲ್ಲಿ ಕಾಳಜಿ ವಹಿಸುತ್ತಿಲ್ಲ ಎಂದು ಟೀಕಿಸಿದರು.DSC_2804
ಜನರ ತೆರಿಗೆಯ ಹಣ ರಸ್ತೆ ದುರಸ್ಥಿಗೆ ಅನುದಾನವಾಗಿ ಬಿಡುಗಡೆಯಾಗುತ್ತಿದ್ದರೂ ಭಷ್ಟ್ರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದಾಗಿ ಇದು ಸರಿಯಾಗಿ ವಿನಿಯೋಗ ಆಗುತ್ತಿಲ್ಲ ಎಂದು ಆರೋಪಿಸಿದ ಅವರು, ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಯ ಅಧ್ಯಾಯನಕ್ಕಾಗಿ ವಿದೇಶಕ್ಕೆ ತೆರಳಿ ತೆರಿಗೆ ಹಣದಿಂದ ಮೋಜು ಮಾಡಿಕೊಂಡು ಬರುತ್ತಿದ್ದಾರೆ. ರಸ್ತೆ ಸಂಚಾರಕ್ಕೆ ಹೇಗಿರಬೇಕೆಂಬುದನ್ನು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಬೇಕಿಲ್ಲ. ಇಲ್ಲಿನ ಸಾಮಾನ್ಯ ಜನರು ಕೂಡಾ ಜ್ಞಾನಹೊಂದಿದ್ದಾರೆ ಎಂದರು.

DSC_2806
ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕೇವಲ ಸ್ವಾರ್ಥ ಸಾಧನೆಗಾಗಿ ಕಾಲ ಕಳೆಯುತ್ತಿದ್ದಾರೆ. ಇಂತಹ ಜನಪ್ರತಿನಿಧಿಗಳು ನಮಗೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಅವರು ಎಲ್ಲ ಸಮಸ್ಯೆ ಪರಿಹಾರಕ್ಕೆ ಪ್ರತಿಭಟನೆ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಸರ್ವೀಸ್ ರಸ್ತೆಯ ದುರಸ್ಥಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟ ಇಲಾಖೆ ಆಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಕನಿಷ್ಠ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು.

DSC_2814
ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಬಿ.ಹಸೈನ್ ಪಲ್ರ್ಯ, ಕೃಷ್ಣ ಅಲ್ಲಿಪಾದೆ, ಅಬ್ದುಲ್ ರಝಾಕ್ ಕುಂಪಕಲ್ಲು, ವಕೀಲ ರಾಜೇಶ್ ಬೊಲ್ಲುಕಲ್ಲು, ರಾಮಚಂದ್ರ ಸುವರ್ಣ, ನಿತಿನ್, ಪ್ರಮೋದ್ ಅಜ್ಜಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು. ವಸಂತ್ ಸ್ವಾಗತಿಸಿ ವಂದಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಯತು.

By suddi9

Leave a Reply

Your email address will not be published. Required fields are marked *