ಕೈಕಂಬ: ಯಕ್ಷಕಲಾಸಂಘ ವರಕೋಡಿ 13ನೇ ವರ್ಷದ ಕಲಾಸೇವೆಯಾಗಿ ನಡೆಸಿಕೊಂಡು ಬರುತ್ತಿದ್ದ ಶ್ರೀ ಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರು ಮಾ.18 ರಂದು ಭಾನುವಾರ ರಾತ್ರಿ 9.30ಕ್ಕೆ ಯಕ್ಷಕಲಾ ಸಂಘದ ಕಟ್ಟಡದ ಯಕ್ಷಧಾಮ ಬಳಿಯಲ್ಲಿ ನಡೆಯಲಿದೆ “ನಾಗತಂಬಿಲ” ಎಂಬ ತುಳು ಕಥಾಭಾಗವನ್ನು ಆಡಿ ತೋರಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಬಡಗಬೆಳ್ಳೂರು ಹಿರಿಯ ಪ್ರಾಥಮಿಕ ಶಾಲೆಯ ನಿವೃತ ಶಿಕ್ಷಕರಾದ ಸಂಕಪ್ಪ ಶೆಟ್ಟಿ ಮತ್ತು ಲಿಲ್ಲಿ ಡಿ” ಸೋಜಾ ಇವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ಯಕ್ಷಕಲಾ ಸಂಘದ ಪ್ರಕಟಣೆ ತಿಳಿಸಿದೆ.