ಕೈಕಂಬ: ಎಡಪದವು ಪಾಡ್ಯಾರ್ ಫ್ರೆಂಡ್ಸ್ ಕ್ಲಬ್ ತೃತೀಯ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಪಾಡ್ಯಾರ್ ಮಜಲುಗದ್ದೆಯಲ್ಲಿ ಪಲ್ಕೆ ಶ್ರೀ ರತೀಶ್ ಭಟ್ ಮಾ. 17 ರಂದು ಶನಿವಾರ ನೆರವೇರಿಸಿದರು.
ಮಳಲಿ ಮಟ್ಟಿ ಶ್ರೀ ಕಾಲಭೈರವ ಮಂಜುನಾಥೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಹಾಗೂ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಇವರಿಂದ “ಬೊಳ್ಪೊಟ್ಟು ಶ್ರೀ ಭದ್ರಕಾಳಿ ಮಹಾತ್ಮೆ” ಎಂಬ ತುಳು ಯಕ್ಷಗಾನ ಬಯಲಾಟ ನಡೆಯಿತು.
