ಕೈಕಂಬ: ಯಕ್ಷಗಾನ ಬರೇ ಕಲೆ ಅಲ್ಲ. ನಾವೆಲ್ಲರೂ ಅದನ್ನು ಸರಸ್ವತಿಯ ಆರಾಧನೆಯಂತೆ ಆರಾಧಿಸಿಕೊಂಡು ಬರುತ್ತಿದ್ದೇವೆ. ನಾನು ಎಲ್ಲಿಯಾದರೂ ಗುರುತಿಸಲ್ಪಟ್ಟಿದ್ದರೆ ಅದು ಯಕ್ಷಗಾನದಿಂದ ಎಂದು ಹೇಳಲು ಸಂತೋಷಪಡುತ್ತೇನೆ ಎಂದು ಬಡಗಬೆಳ್ಳೂರು ಶಾಲೆಯ ನಿವೃತ ಮುಖ್ಯ ಶಿಕ್ಷಕ ಸಂಕಪ್ಪ ಶೆಟ್ಟಿ ಹೇಳಿದರು.

ಅವರು ನಾನು ಶಾಲೆಗಿಂತ ಹೆಚ್ಚಿನ ಶಿಕ್ಷಣ ಯಕ್ಷಗಾನದಿಂದ ಪಡೆದುಕೊಂಡಿದ್ದೇನೆ. ನನ್ನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಶಾಲಾ ಜೀವನಕ್ಕಿಂತ ಹೆಚ್ಚಾಗಿ ನೋಡಿದ ಯಕ್ಷಗಾನ ನನಗೆ ಪ್ರೇರಣೆ ನೀಡಿದೆ. ಯಕ್ಷಗಾನದಿಂದ ನಮಗೆ ಉತ್ತಮ ಸಂಸ್ಕಾರ ಸಿಗುತ್ತದೆ ಎಂದರು.ಅವರು ಯಕ್ಷಕಲಾ ಸಂಘ ವರಕೋಡಿ ಇದರ ವತಿಯಿಂದ 13ನೇ ವರ್ಷದ ಯಕ್ಷಗಾನ ಬಯಾಲಾಟದ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅವರೊಂದಿಗೆ ನಿವೃತ ಶಿಕ್ಷಕಿ ಲಿಲ್ಲಿಡಿ” ಸೋಜಾ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ನನ್ನ ಶಿಷ್ಯ ವೃಂದದವರಿಂದ ಸನ್ಮಾನಿಸಲ್ಪಡುವುದಕ್ಕೆ ಸಂತೋಷವಾಗುತ್ತಿದೆ. ಸಂಘವು ಯಕ್ಷಗಾನಕ್ಕೆನೀಡುತ್ತಿರುವ ಪ್ರೋತ್ಸಾಹ ಮೆಚ್ಚುವಂತಹದ್ದಾಗಿದೆ. ಇದು ಪುಣ್ಯದ ಕೆಲಸ ಎಂಬುದು ನನ್ನ ಭಾವನೆ. ನನ್ನ ಶಿಷ್ಯ ವೃಂದದಿಂದ ತಮ್ಮ ಮಕ್ಕಳಿಗೆ ಯಕ್ಷಗಾನ ಕಲೆಯ ಅಭಿರುಚಿಗೆ ಬೆಳೆಯುವಂತೆ ನೋಡಿಕೊಳ್ಳಿ. ನಾನು 35 ವರ್ಷ ಇಲ್ಲಿ ಶಿಕ್ಷಕ ವೃತ್ತಿ ನಡೆಸಿದ್ದೇನೆ. ನನ್ನನ್ನು ಗುರುತಿಸಿದ ಈ ಯಕ್ಷಕಲಾ ಸಂಘ ಹಾಗೂ ನನ್ನ ಶಿಷ್ಯವಂದಕ್ಕೆ ಶ್ರೇಯಸ್ಸು ಉಂಟಾಗಲಿದೆ ಎಂದವರು ಹಾರೈಸಿದರು.
ಈ ಸಂದರ್ಭದಲ್ಲಿ ಪರಕೂರು ರಮೇಶ್ಚಂದ್ರ ಭಂಡಾರಿ, ಬೆಳ್ಳೂರು ಮಾಡ್ಲಾಯ ದೈವಪಾತ್ರಿ ಚಂದ್ರಶೇಖರ ಅಜಿಲ, ಪ್ರಜ್ವಲ್ ಶೆಟ್ಟಿ ಕಮ್ಮಾಜೆ,ಯಕ್ಷಕಲಾಸಂಘದ ಅಧ್ಯಕ್ಷ ವಿಶ್ವಂಭರ ಹಾಗೂ ಉಷಾ ಉಪಸ್ಥಿತರಿದ್ದರು. ದಿನೇಶ್ ವರಕೋಡಿ ಕಾರ್ಯಕ್ರಮ ನಿರೂಪಿಸಿದರು.ನಂತರ ಶ್ರೀ ಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ “ನಾಗತಂಬಿಲ”ಎಂಬ ತುಳು ಯಕ್ಷಗಾನ ಬಯಲಾಟ ನಡೆಯಿತು.




