ಬಂಟ್ವಾಳ : ತಾಲೂಕು ಪಿಂಚಣಿದಾರರ ಸಂಘದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ಸರಕಾರಿ ನೌಕರ ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ನವರ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಶ್ವನಾಥ ಪೂಜಾರಿ, ನಿವೃತ್ತ ಅಸಿಸ್ಟೆಂಟ್ ಕಮೀಷನರ್ ಸುಂದರ್ ಭಟ್ ಭಾಗವಹಿಸಿದ್ದರು.
ಸಭೆಯಲ್ಲಿ 75 ವರ್ಷ ವಯಸ್ಸು ತುಂಬಿದ ಡಿ.ಪದ್ಮನಾಭ ರಾವ್ ವಿಟ್ಲ, ಸೀತಾರಾಮ ಪೂಂಜ ಮಂಜನಾಡಿ, ಎಮ್.ನೇಮಿರಾಜ ಬರಿಮಾರು, ಎನ್.ಹರಿಶ್ಚಂದ್ರ ಭಟ್ ಕೈಕುಂಜೆ, ದಾಮೋದರ್ ಆಚಾರ್ ಕಡೇಶ್ವಾಲ್ಯ, ಕೆ.ರಘು ಶೆಟ್ಟಿ ವಿಟ್ಲ, ಉಪೇಂದ್ರ ಆಚಾರ್ ಪಾಣೆಮಂಗಳೂರು, ಸರೋಜಿನಿ ಆರ್.ಶೆಟ್ಟಿ ಶಂಭೂರು ಮತ್ತು ಮಹಾಬಲ ಆಳ್ವ ಕಮ್ಮಾಜೆ ಇವರುಗಳನ್ನು ಮುಖ್ಯ ಅತಿಥಿಗಳು ಶಾಲು ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು.
ಮಹಾಬಲೇಶ್ವರ ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ನೀಲೋಜಿರಾವ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಎ.ದಾಮೋದರ್ ವಂದಿಸಿದರು. ಬಿ.ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.