ಕೈಕಂಬ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರು ಚಲಾಯಿಸುವ ಮತಪತ್ರದ ವಿವಿ ಪ್ಯಾಟ್ ನ ಪ್ರಾತ್ಯಕ್ಷಿಕೆ ಎ. 14 ಹಾಗೂ 15ರಂದು ಗುರುಪುರ, ಅಡ್ಡೂರು, ತಾರಿಕರಿಯದ ಮತಗಟ್ಟೆಗಳಲ್ಲಿ ಆಯೋಜಿಸಲಾಗಿದೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 142, 143, 144, 145, 146ರಲ್ಲಿ(ಗುರುಪುರ  ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪದವಿಪೂರ್ವ ಕಾಲೇಜು ಗುರುಪುರ) ಎ. 14ರಂದು ಬೆಳಗ್ಗೆ 9-10, 10-11, 11-12, 2-3 ಹಾಗೂ ಮಧ್ಯಾಹ್ನ 3-4 ಗಂಟೆಯವರೆಗೆ ಪ್ರಾತ್ಯಕ್ಷಿಕೆ ಜರಗಲಿದೆ.

ಎಪ್ರಿಲ್ 15ರಂದು 198ರಲ್ಲಿ ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ(ಅಡ್ಡೂರಿನ ತಾರಿಕರಿಯ ದಕ ಜಿಪಂ ಹಿರಿಯ ಪ್ರಾಥಮಿಕ ಶಾಲೆ) ಹಾಗೂ 199, 200 ಮತ್ತು 201ರಲ್ಲಿ ಬೆಳಿಗ್ಗೆ 10-11, 11-12 ಹಾಗೂ 12-1 ಗಂಟೆಯವರೆಗೆ(ಅಡ್ಡೂರು ದಕ ಜಿಪಂ ಹಿರಿಯ ಪ್ರಾಥಮಿಕ ಶಾಲೆ-ಹೊಸ ಕಟ್ಟಡ, ಅಡ್ಡೂರು ದ ಕ ಜಿಪಂ ಹಿರಿಯ ಪ್ರಾ. ಶಾಲೆ-ಹಳೆ ಕಟ್ಟಡ ಮತ್ತು ಅಡ್ಡೂರು ದಕ ಜಿಪಂ ಹಿರಿಯ ಪ್ರಾಥಮಿಕ ಶಾಲೆ-ಹಳೆ ಕಟ್ಟಡ), ಬೆಳಿಗ್ಗೆ 10-11, 11-12 ಹಾಗೂ 12-1 ಗಂಟೆಯವರೆಗೆ ವಿವಿ ಪ್ಯಾಟ್ ಯಂತ್ರದ ಪ್ರಾತ್ಯಕ್ಷಿಕೆ ನಡೆಯಲಿದ್ದು,

ಅಲ್ಲದೆ ಕುಪ್ಪೆಪದವು ದ.ಕಜಿಲ್ಲಾ ಪಂಚಾಯತಿಪ್ರಾಥಮಿಕ ಶಾಲೆ ಭಾಗ ಸಂಖ್ಯೆ 181 3.ಗಂಟೆಗೆ, ಕುಪ್ಪೆಪದವು ದ.ಕಜಿಲ್ಲಾ ಪಂಚಾಯತಿಪ್ರಾಥಮಿಕಶಾಲೆ ಭಾಗ ಸಂಖ್ಯೆ 182 4.ಗಂಟೆಗೆ, ದ.ಕ.ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಡಿ ಮತಗಟ್ಟೆ ಭಾಗಸಂಖ್ಯೆ 179. 11 ಗಂಟೆಗೆ ,ದ.ಕ.ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಡಿ ಮತಗಟ್ಟೆ ಭಾಗಸಂಖ್ಯೆ 180 2.ಗಂಟೆಗೆ ಪ್ರಾತ್ಯಕ್ಷಿಕೆ ನಡೆಯಲಿದ್ದು, ವ್ಯಾಪ್ತಿ ಪ್ರದೇಶದ ಮತದಾರರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ

By suddi9

Leave a Reply

Your email address will not be published. Required fields are marked *