ಕೈಕಂಬ : ಧಾರ್ಮಿಕ ಚಿಂತಕ, ಸಾಹಿತಿ, ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಖ್ಯಾತ ಕಾಫಿ ಉದ್ಯಮಿ ಸಿದ್ದಾರ್ಥ ಹೆಗಡೆ ಹಾಗೂ ನಿಟ್ಟೆಗುತ್ತು ಮುಕ್ತಾ ಆರ್ ಶೆಟ್ಟಿಯವರಿಗೆ ಗುರುಪುರ ಗೋಳಿದಡಿಗುತ್ತಿನ ಮನೆಯಲ್ಲಿ ಗುತ್ತು, ಬೀಡು, ಬಾವ, ಬಾರಿಕೆ, ಪರಾಡಿ ಮತ್ತು ಮಾಗಂದಡಿಗಳನ್ನೊಳಗೊಂಡ ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟದ ವತಿಯಿಂದ ಶನಿವಾರ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಯಿತು.
ಕೂಟದ ಪ್ರಧಾನ ಕಾರ್ಯದರ್ಶಿ ಪರಮಾನಂದ ಸಾಲ್ಯಾನ್ ಪ್ರಸ್ತಾವನೆಗೈದರು. ಮಹೇಶ್ ಶೆಟ್ಟಿ ತಿಮರೋಡಿಬೀಡು, ಸುಬೋಧ ಆಳ್ವ ಪಾಂಗಾಳಬೀಡು, ರೋಹಿತ್ ಕುಮಾರ್ ಕಟೀಲ್ ಮಜಲೊಟ್ಟುಬೀಡು, ಸತೀಶ್ ಕಾವ ಬೆಳ್ಳಿಬೆಟ್ಟು, ಮಹಾಲಿಂಗ ನಾಯಕ್ ಏರ್ಯರ ಗುಣಗಾನ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.ಕೂಟದ ಅಧ್ಯಕ್ಷ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಏರ್ಯ ಗುಣಗಾನ ಮಾಡಿದರು. ಜೊತೆ ಕಾರ್ಯದರ್ಶಿ ನವೀನ್ ಶೆಟ್ಟಿ ಎಡ್ಮೆಮಾರ್ಗುತ್ತು ವಂದಿಸಿದರು.